ಇಂದು ಎನಗೆ (ಶ್ರೀ)ಗೋವಿಂದ ನಿನ್ನ ಪಾದಾರವಿಂದವ ತೋರೋ ಮುಕುಂದನೆ | 
ಸುಂದರ ವದನನೇ ನಂದಗೋಪನ ಕಂದ ಇಂದಿರ ರಮಣ || ಪ ||

ನೊಂದೆನಯ್ಯ ನಾ ಭವಬಂಧನದೊಳು ಸಿಲುಕಿ | 
ಮುಂದೆ ದಾರಿ ಕಾಣದೇ ಕುಂದಿದೆ ಜಗದೊಳು |
ಕಂದನಂತೆಂದೆನ್ನ ಕುಂದುಗಳೆಣಿಸದೆ |
ತಂದೆ ಕಾಯೋಕೃಷ್ಣ ಕಂದರ್ಪ ಜನಕನೇ || ೧ ||

ಮೂಢತನದೀ ಬಲುಹೇಡಿಜೀವನನಾಗಿ |
ದೃಢಭಕ್ತಿಯನ್ನು ಮಾಡಲಿಲ್ಲವೊ ಹರಿಯೇ |
ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೇ |
ಗಾಡಿಕಾರ ಕೃಷ್ಣ ಬೇಡಿಕೊಂಬೆ(ಡೆ)ನೊ ನಿನ್ನ || ೨ ||

ಧಾರುಣಿಯೊಳು ಬಹುಭಾರ ಜೀವನನಾಗಿ |
ದಾರಿತಪ್ಪಿ ನಡದೆ ಸೇರಿದೇ ಕುಜನರ |
ಆರು ಕಾಯುವರಿಲ್ಲ ಸೇರಿದೇ ನಿನಗಯ್ಯ |
ಧೀರ ವೇಣುಗೋಪಾಲ ಪಾರುಗಾಣಿಸೊ ಹರಿಯೇ || ೩ ||

ಇಂದು ಎನಗೆ (ಶ್ರೀ)ಗೋವಿಂದ ನಿನ್ನ ಪಾದಾರವಿಂದವ ತೋರೋ ಮುಕುಂದನೆ |
ಸುಂದರ ವದನನೇ ನಂದಗೋಪನ ಕಂದ ಇಂದಿರ ರಮಣ ||

ಆಲಾಪನ
ರಾಘವೇಂದ್ರ ಮಹಿಮೆ ಚಿತ್ರಕ್ಕಾಗಿ ಪಿ. ಬಿ ಶ್ರೀನಿವಾಸ ಅವರು ಆಲಾಪಿಸಿದ ಪದ, ಯೂಟ್ಯೂಬ್ ನಲ್ಲಿ
'ಶ್ರೀರಾಘವೇಂದ್ರ ವೈಭವ ಚಿತ್ರದಲ್ಲಿನ ಪದ, ಯೂಟ್ಯೂಬ್ ನಲ್ಲಿ
indu enage govinda s janaki
ವರ್ಗ
ವರ್ಗ:ರಾಘವೇಂದ್ರ ತೀರ್ಥರ ಸಾಹಿತ್ಯ
ವರ್ಗ:ಕನ್ನಡ ಸಾಹಿತ್ಯ